ಗುರುವಾರ, ಅಕ್ಟೋಬರ್ 5, 2017

ಸಾಬರ ಬಿರಿಯಾನಿ ಕಥೆ ಮತ್ತು ಡ್ರೈವರು !

ನಮ್ಮ ಸ್ನೇಹಿತರ ಗುಂಪಿನಲ್ಲಿ ಒಬ್ಬನಿದ್ದ ,ಅವನ ಮುಂದೆ ನಾವೇನಾದರೂ ವೆಹಿಕಲ್ ವಿಚಾರ ಮಾತನಾಡಿದೆವೆಂದರೆ ಅಷ್ಟೇ

"ಸೈಲೆನ್ಸರಿನ ತೂತಿನ ಕಡೆಯಿಂದ ನಮ್ಮ ತಲೆ ತೂರಿಸಿ ಇಂಜಿನ್ನಿನ ಒಳಗಿರೋ ಆಯಿಲ್ಲಿನಲ್ಲಿ ಗಿಲಿ ಗಿಲಿ ಅಲ್ಲಾಡಿಸಿ , ಅದೂ ಸಾಲದೆಂದು ಪಿಸ್ಟನ್ನಿನ ಮೇಲೆಯೂ ಸ್ವಲ್ಪ ಹೊತ್ತು ಟುಕು ಟುಕು ಕೂಚುಮರಿ ಮಾಡಿಸಿ ಕೊನೆಗೆ  ಏರುಪಿಲ್ಟರಿನ ಮೂಲಕ ಎಕ್ಸಲ್ಲೆಂಟಾಗಿ ಫಿಲ್ಟರಾಗಿ ಡೀಜಲ್ ಟ್ಯಾಂಕಿನ ಮೂಲಕ ಹೊರಬಂದೆವೇನೋ ಎಂಬಂತೆ ತಲೆ ಕೆಟ್ಟು ಕೆರ ಹಿಡಿಸಿಬಿಡುತ್ತಿದ್ದ"

ವೆಹಿಕಲ್ಲಿನ ಕುರಿತು ಅವನಿಗೆ ಅಷ್ಟೊಂದು ಜ್ಞಾನವಿತ್ತಾ ! ಎಂದು ಆಶ್ಚರ್ಯಪಡಬೇಡಿ .ಬೇಸಿಕಲಿ ಅವನೊಬ್ಬ ಅನಕ್ಷರಸ್ಥ ಡ್ರೈವರ್ ಅಷ್ಟೇ , ಕೆಲವರು ಹೀಗೆ ತಮಗಿರುವ ಅಜ್ಞಾನವನ್ನು ಮುಚ್ಚಿಕೊಳ್ಳಲು ಬಾಯಿಬೇದಿಯಾದವರಂತೆ ಒಂದೇ ಸಮನೆ ಬೋಧನೆ ಕೊಡುತ್ತಿರುತ್ತಾರೆ ಅಷ್ಟೇ.ಅತಿಯಾದ ಮಾತುಗಾರರನ್ನು ನಂಬಬಾರದು ಎಂದು ಇತಿಹಾಸ ಹೇಳುತ್ತದೆ ಎಂಬುದು ಅವನಿಗೆ ಅರಿವಿಲ್ಲ ಬಿಡಿ.

ಇವನ ಮಾತು ಕೇಳೀ ಕೇಳೀ ತಲೆಕೆಟ್ಟು ಪಕ್ಕಕ್ಕೆ ಎದ್ದು ಬಂದವನೊಬ್ಬ "ರೀ ಉಮೇಶಣ್ಣೋ ನನ್ಮಗ ತಲೆ ತಿಂತನಲ್ಲಣ್ಣೋ" ಅಂದ.

ಅಷ್ಟರಲ್ಲಿ ನಮ್ಮ ಶಾಪ್ ಮುಂದೆಯೇ ರಾಜಪ್ಪ ಹೋಗ್ತಾ ಇದ್ದರು ಅವರನ್ನ ನೋಡಿದ ನನ್ನ ಸ್ನೇಹಿತ ರೀ ಉಮೇಶಣ್ಣಾ ರಾಜಪ್ಪನನ್ನ ಕರೆಸಿ ನನಮಗ ಡ್ರೈವರಿಗೆ ಸರಿಯಾಗಿ ಬೈಯ್ಯಿಸಿರಿ ಅಂದ.

ರಾಜಪ್ಪ ನಾ ಕಂಡ ವಿಚಿತ್ರ ವ್ಯಕ್ತಿಗಳಲ್ಲೊಬ್ಬ ,ನನಗಿಂತಲೂ 25 ವರ್ಷ ದೊಡ್ಡವನು ಕೂಡ ಆತ ನಮ್ಮ ಟೀಮಿನ ಯಾರೊಡನೆಯೂ ಹೆಚ್ಚು ಮಾತನಾಡುತ್ತಿರಲಿಲ್ಲ ,ಯಾರ ಬಳಿಯೂ ತನ್ನ ಆಂತರಿಕ ಸಮಸ್ಯೆ ಹೇಳಿಕೊಳ್ಳುತ್ತಿರಲ್ಲ ಆದರೆ ನಾನು ಮಾತನಾಡಿಸಿದರೆ ಮಾತ್ರ ನಗುನಗುತ್ತಾ ಮಾತನಾಡುತ್ತಿದ್ದ .

ಜೀವನದಲ್ಲಿ ಬಂದ ಸಮಸ್ಯೆಗಳನ್ನು ನೋಡಿ ನೋಡಿ ಬೇಸತ್ತುಹೊದ ರಾಜಪ್ಪ ಪ್ರಪಂಚದ ಎಲ್ಲವನ್ನೂ ,ಎಲ್ಲರನ್ನೂ ವಿರೋಧಿಸುತ್ತಿದ್ದನು ಹಾಗಾಗಿ ಅವನ ಮುಂದೆ ಯಾರ ಕೆಲಸವನ್ನು ಹೇಳಿದರೂ ಕೊಂಕು ತೆಗೆದು ಕೆಟ್ಟ ಭಾಷೆಯಲ್ಲಿಯೇ ಬೈಯ್ದುಬಿಡುತ್ತಿದ್ದನು.

"ಏನ್ ರಾಜಪ್ಪೋರೆ ಕಡೆಯಿಂದ ಬರ್ತಿದೀರಾ" ಎಂದು ರಾಜಪ್ಪನನ್ನು ನನ್ನ ಸ್ನೇಹಿತನ ಒತ್ತಾಯದ ಮೇರೆಗೆ ಮಾತಿಗೆಳೆದೆ.

"ಏನಿಲ್ಲಪ್ಪ ಇಲ್ಲೇ ಟೀ ಕುಡಿಯೋಕೆ ಹೋಗಿದ್ದೆ" ಅಂತ ಟೀ ಹೋಟೆಲ್ ಕಡೆ ಕೈ ತೋರಿಸುತ್ತಾ ಹೇಳಿ "ಏನು ಹೀಗೆ ಯಾರನ್ನೋ ಕಾಯ್ತಾ ನಿಂತಿದೀರಲ್ಲಾ " ಅಂದ.

ನಾನು ನನ್ನ ಸ್ನೇಹಿತನೂ ಒಳಗೆ ನಮಗೆ ತಲೆ ತಿನ್ನುತ್ತಿದ್ದ ಬಾಡಿಗೆ ಕಾರಿನ ಡ್ರೈವರಿಗೆ ಬೈಯ್ಯಿಸಬೇಕೆಂದು ಮೊದಲೇ ನಿರ್ಧರಿಸಿದ್ದರಿಂದ "ಕಾರ್ ಡ್ರೈವರಿಗೆ ಬರೋಕೆ ಹೇಳಿದ್ದೆ ಅವನಿಗೆ ಕಾಯ್ತಾ ಇದ್ದೀನಿ ರಾಜಪ್ಪೋರೆ "ಅಂದೆ .ರಾಜಪ್ಪನಿಗೆ ಅಷ್ಟರ ಮಟ್ಟಿಗೆ ಕೀ ಕೊಟ್ಟರೆ ಸಾಕಿತ್ತು ಮಿಕ್ಕಿದ್ದೆಲ್ಲವನ್ನೂ ಅವನೇ ಮಾತನಾಡಿಬಿಡುತ್ತಿದ್ದ.

"ಕಾರ್ ಡ್ರೈವರ್"ಅನ್ನೋ ಪದ ಕೇಳಿದ್ದೇ ತಡ ರಾಜಪ್ಪ ಶುರುವಚ್ಚಿಕೊಂಡ....

"ಅಯ್ಯೋಈ ಕಾರು ಡ್ರೈವರ್ ಸೂಳಾಮಕ್ಕಳು ಸರಿ ಇಲ್ಲ ಕಣಪ್ಪ ಮಿಂಡ್ರಿ ಮಕ್ಳಿಗೆ ಸ್ಯಾಟ,ಬ್ಯಾಟ,ಗೂಟ,ಬಾಡಿಗೆ,ಕಿಲೋ ಮೀಟರು ಎಲ್ಲಾ ಕೊಟ್ರೂ ಕೂಡ ಮಿಂಡ್ರುಗುಟ್ದೋರು ಸುಮ್ನೆ ಇರಲ್ಲ ನಾವು ಟೀ ಕುಡಿದಾಗ ಟೀ ಕೊಡಿಸಬೇಕು.ಊಟ ಮಾಡುವಾಗ ಊಟ ಕೊಡಿಸಬೇಕು ಇಷ್ಟೆಲ್ಲಾ ಕೊಟ್ರೂ ಸೈತ ನಾವು ಹಿಂದಗಡೆ ಕೂತ್ಕೊಂಡು ನಮ್ ಹೆಂಡತಿ ಬಾಯಿಗೆ ಬಾಳೆಹಣ್ಣು ತಿನ್ನಿಸೋಕೆ ಹೋದರೆ ಮುಂದಗಡೆಯಿಂದ "...." ಅಂತ ಬಾಯಿ ತಗೀತವೆ ಇವನಮ್ಮನಾಡ ಆಗ ಬಾಯಿಗೆ ಬಾಳೆಹಣ್ಣು ಕೊಡ್ಲಿಲ್ಲಾಂದ್ರೆ  ದಾರಿಯಲ್ಲಿ ಕಾಣೋ ಯಾವ್ದಾರ ಮರ ಹತ್ತಿಸಿ ಸಾಯಿಸ್ಬಿಡ್ತಾರೆ  ಅವ್ನ್  ತಾಯ್ನಾಡ" ಅಂತ ಬೈಯ್ಯಲು ಶುರುವಾದ ರಾಜಪ್ಪನ ಚರಂಡಿ ನೀರಿಗೆ ಕಲ್ಲೆಸೆದಂತೆ ಸಂಪ್ರೋಕ್ಷಣೆಯಾಗುತ್ತಿದ್ದ ಪದಗಳನ್ನೆಲ್ಲಾ  ಕೇಳಿಸಿಕೊಂಡ ಡ್ರೈವರು ಮೆಲ್ಲನೆ ಜಾಗ ಖಾಲಿ ಮಾಡಿಬಿಟ್ಟ.

ಡ್ರೈವರು ಹೋದ ಮೇಲೂ ಸಂಪ್ರೋಕ್ಷಣಾ ಭರಿತವಾಗಿ ಮಾತನಾಡುತ್ತಲೇ ಇದ್ದದ್ದರಿಂದ ರಾಜಪ್ಪನ ಮಾತನ್ನು ಬೇರೆ ದಾರಿಗೆ ತಿರುಗಿಸಬೇಕಾದ ಪ್ರಕ್ಷುಬ್ಧ ಪರಿಸ್ಥಿತಿ ನಮ್ಮದಾಗಿತ್ತಾದ್ದರಿಂದ ನಾನು "ರಾಜಪ್ಪೋರೆ ಸಾಬರು ಬಿರಿಯಾನಿ ಮಾಡ್ತಾರಲ್ಲ ವಿಚಾರ ನಿಮಗೆ ಗೊತ್ತಾ"ಅಂದು ಧಾರ್ಮಿಕ ಜಗಳಕ್ಕೆ ರಾಜಪ್ಪನನ್ನು ಅಣಿಗೊಳಿಸಿದೆ !

"ಸಾಬರ ಬಿರಿಯಾನಿ ಅಂದರೆ ಇನ್ನೇನೂ ಅಲ್ಲ ಕಣಪ್ಪಾ ಯಾವದಾನ ಚರಂಡಿ ಮ್ಯಾಲೆ ಚಪ್ಪಡಿ ಕಲ್ಲು ಹಾಕಿಕೊಂಡು ಅದರ ಮ್ಯಾಲೆ ಶಾಮಿಯಾನ ಹಾಕಿ ನಾಲಕ್ ಜನ ಗಂಡಸತ್ತ ಮುಂಡೇರನ್ನ ಕೂರಿಸಿ ಇಪ್ಪತ್ತೆರಡು ಚೀಲ ಶುಂಟಿ,ಬೆಳ್ಳುಳ್ಳಿ ಸುಲಿಯೋದಕ್ಕೆ ಬಿಟ್ಟಿರುತ್ತಾರೆ ಅವರು ಸುಲಿದು ಮುಗಿಸೋದೇ ತಡ ಒಬ್ಬ ಗಡ್ಡದ ಸಾಬಿ ಬಂದು ಕೋಳಿದೋ ಕುರೀದೋ ಮಾಂಸ ಒಂದು ಪಾತ್ರೆಗೆ ಸುರಿದು ಬೆಂಕಿ ಇಕ್ಕಿಬಿಡ್ತಾನೆ.

 ಆಮ್ಯಾಲೆ ಗಂಡಸತ್ತ ಮುಂಡೇರು ಸುಲಿದಿರೋ ಶುಂಟಿಬೆಳ್ಳುಳ್ಳಿ ತಂದು ಒಂದೂವರೆ ಗಂಟೆ ಮಾಂಸದಾಕೆ ಸುರಿದು "ಒತ್ತಾಚ್"(ಇಷ್ಟು ಸಾಕು ಅನ್ನೋ ಅರ್ಥದಲ್ಲಿ ಸಾಬರ ಬಟ್ಟನ ಕಡೆ ನೋಡ್ತಾರೆ) ಆಗ ಗಡ್ಡಾಸಾಬಿ  "ಇಷ್ಟು ಬೆಲ್ಲುಲ್ಲಿಗೇ ಧಾಲಿದರೆ ಬಿರಿಯಾನೀಗೇ ಆಗ್ತಾರೇ" ಕ್ಯಾಮಾ ತುಮ್ಹೆ ....ಅರೇ ಇಸ್ಕೀ ಮಾಕೀ "ಅಭೀ ಧಾಲೋ....ಅಭೀ..ಧಾಲೋ" ಅಂದು ಇಪ್ಪತ್ತೆರಡು ಚೀಲ ಬೆಳ್ಳುಳ್ಳಿ ಶುಂಟಿ ಸುರಿಯೋತಂಕ ಬಿಡೋದಿಲ್ಲ ಕಣಪ್ಪಾ....

ಮಿಂಡ್ರುಗುಟ್ದೋರು ಬಿರಿಯಾನಿ ಮಾಡೋ ಹುಟ್ಟಿಗೆ ಬೀದಿಯಾಗಿರೋ "ಹಂದಿ"ಗಳೆಲ್ಲಾ....ಹೋ"ಅವನಮ್ಮನಾಡ ನಮ್ಮನ್ನ ಸಾಯಿಸೋದಕ್ಕೆ   ಮಿಂಡ್ರುಗುಟ್ದೋರೆಲ್ಲಾ ಸೇರ್ಕಂಡು ಯಾವ್ದೋ ಹೊಸ ತರ ವಿಷ ತಯಾರು ಮಾಡ್ತಾ ಅವರೆ ಕಣ್ರಲಾ ಓಡ್ರೋ ಅಂತ ಚರಂಡಿ ಬಿದ್ದು ಓಡೋಗ್ತವೆ.

ಉಮೇಶಪ್ಪಾ ನಾನ್ ಹಿಂಗೇಳ್ತಿದೀನಿ ಅಂದ್ಕಬೇಡಾ ಬೇಕಿದ್ರೆ ಚೆನ್ನಾಗಿ ಮಾಂಸ ತಿನ್ನೋ ಯಾವ ಹುಲಿ.ಸಿಂಹದ ಮುಂದುಕ್ಕೆ ಬೇಕಿದ್ರೂ ಬಿರಿಯಾನಿ ಇಕ್ಕಿ ನೋಡು ಅವು "ಬ್ಯಾಡ ಬ್ಯಾಡ"ಅಂತ ತಲೆ ಅಲ್ಲಾಡುಸಲಿಲ್ಲಾಂದ್ರೆ ನನಗೆ ಬಂದ್ ಕೇಳು .


ಪಾರೆಸ್ಟ್ ನೋರು ವಿಷ ಇಕ್ತಾವ್ರೆ ಅಂದ್ಕಂಡು ಓಡೋಗ್ಬುಡ್ತವೆ ಉಮೇಶಪ್ಪಾ ಏನಂದ್ಕಂಡಿದೀಯಾ ನೀನು ಅಂದ ,ನಾವು ಇನ್ನೂ ಜಾಸ್ತಿ ಹೊತ್ತು ರಾಜಪ್ಪನ ಜೊತೆ ಮಾತಾಡಿದರೆ ನಮ್ಮ ಬುಡಕ್ಕೂ ಬರುತ್ತಾನೆಂದು ತಪ್ಪಿಸಿಕೊಂಡು ಹೊರಟೆವು. ರಾಜಪ್ಪನು ನಮದೂ ಇಂದಿಗೂ ಎಂದಿಗೂ ಮುಗಿಯಲಾರದ ಪಯಣ.
ಕೈ ಕೊಟ್ಟ ಹುಡುಗಿ ಮುಂದೊಂದು ದಿನ ಕಾಲ್ ಮಾಡಿದಾಗ

 “ನನಗೇನಾಗಿದೆ ಬೊಂಬಾಟಾಗಿದ್ದೇನೆ

ಎಂದ ಹುಡುಗನ ಮಾತಷ್ಟೇ ಅವಳಿಗೆ ಕೇಳಿಸಿದ್ದವು !


ಹಾಗೇ ಹೇಳುವಾಗಲೇ ಜಿನುಗಿ ಬಿದ್ದ ಕಣ್ಣೀರು ಮೊಬೈಲಿನಲ್ಲಿ ಅವಳೆಡೆಗೆ ಸಾಗಲೇ ಇಲ್ಲ !
ಒಂದು ಹೂ ಎಂದಿಗೂ ಮತ್ತೊಂದು ಹೂವಿನೊಡನೆ ಹೋಲಿಕೆ ಮಾಡಿಕೊಳ್ಳುವುದಿಲ್ಲ  ! 

ತನ್ನ ಸುವಾಸನೆಯಿಂದಲೇ ಮತ್ತೊಂದು ಹೂವಿನ ಕಪಾಳಕ್ಕೆ ಬಾರಿಸಿಬಿಡುತ್ತದೆ !


ಹಾಗೆಯೇ ಹೆಣ್ಣು ಕೂಡ ತನ್ನ ವ್ಯಕ್ತಿತ್ವದಿಂದಲೇ ಎದುರಿನವರ ಕಪಾಳಕ್ಕೆ ಬಾರಿಸಿಬಿಡುತ್ತಾಳೆ !